ಬರ್ಮದ ಬಾಡ್‍ವಿನ್ ಗಣಿ -
	ಪ್ರಪಂಚದ ಅತ್ಯುತ್ತಮ ಸೀಸದ ಗಣಿಗಳ ಪೈಕಿ ಒಂದು ಇಲ್ಲಿಯ ಅದುರುಗಳಲ್ಲಿ ಸೀಸ ಮತ್ತು ಸತುವು ಮುಖ್ಯವಾದವು. ತಾಮ್ರ ಮತ್ತು ಬೆಳ್ಳಿ ಅದುರುಗಳು ಸಹ ಸಿಗುತ್ತವೆ. ಆದರೆ ನಿಕ್ಕಲ್, ಕೊಬಾಲ್ಟ್, ಆಂಟಿಮೊನಿ ಮತ್ತು ಕ್ಯಾಡ್ಮಿಯಮ್ ಅದುರುಗಳು ಅತ್ಯಲ್ಪ ಪ್ರಮಾಣದಲ್ಲಿವೆ. ಗಣಿ ಪ್ರದೇಶದಲ್ಲಿ ರಯಲೈಟ್, ಟುಫ್, ಪೆಂಟೆಶಿಲೆ ಮತ್ತು ಫೆಲ್‍ಸ್ಟ್ಯಾತಿಕ್ ಮರಳುಶಿಲೆಗಳು ಇವೆ. ಇವೆಲ್ಲ ಪ್ರಾಗ್ಜೀವಕಲ್ಪದ ಪೂರ್ವಾರ್ಧ ಕಾಲಕ್ಕೆ ಸೇರಿದವು. ಈ ಶಿಲೆಗಳಲ್ಲಿ ಸ್ತರ ಭಂಗಗಳಾಗಿ ಶಿಲಾಶ್ರೇಣಿಗಳು ಮೇಲ್ಜಾಚಿ, ಎಲ್ಲವೂ ಛಿದ್ರ ವಿಚ್ಛಿದ್ರವಾಗಿವೆ. ಛಿದ್ರವಲಯದಲ್ಲಿ 2440 ಮೀ ಉದ್ದ ಮತ್ತು 150 ಮೀ ಅಗಲದ ಅದುರು ಪ್ರದೇಶವಿದೆ. ಎರಡು ಅಡ್ಡಸ್ತರಭಂಗಗಳು ಅದುರು ಕಾಯವನ್ನು ಮೂರು ಸಮಭಾಗಗಳಾಗಿ ಕತ್ತರಿಸಿವೆ. ಮಧ್ಯಭಾಗಕ್ಕೆ ಚೈನಾ ಮ್ಯಾನ್ ಅದುರು ಕಾಯವೆಂದು ಹೆಸರು. ಇದಕ್ಕೆ ಉತ್ತರದಲ್ಲಿರುವುದು ಷಾನ್ ಅದುರು ಕಾಯ, ದಕ್ಷಿಣದಲ್ಲಿರುವುದು ಮೈಂಗ್‍ಥ ಅದುರು ಕಾಯ. ಚೈನಾಮ್ಯಾನ್ ಮತ್ತು ಷಾನ್ ಅದುರು ಕಾಯಗಳನ್ನು ಯುನಾನ್ ಸ್ತರಭಂಗ ಬೇರ್ಪಡಿಸಿ ನೈರುತ್ಯಕ್ಕೆ 210 ಮೀ ದೂರ ಪಾಶ್ರ್ವಪಲ್ಲಟಗೊಳಿಸಿದೆ; ಚೈನಾಮ್ಯಾನ್ ಮತ್ತು ಮೈಂಗ್‍ಥ ಅದುರು ಕಾಯಗಳನ್ನು ಹೆಸೆನ್ವಿ ಸ್ತರಭಂಗ ಬೇರ್ಪಡಿಸಿ ಆಗ್ನೇಯಕ್ಕೆ 365 ಮೀ. ದೂರ   ಪಾಶ್ರ್ವಪಲ್ಲಟಗೊಳಿಸಿದೆ; ಆಳದಲ್ಲಿರುವ ಗ್ರ್ಯಾನೈಟ್ ಶಿಲಾಪಾಕದಿಂದ ಹೊರಬಿದ್ದ ಖನಿಜದ್ರಾವಣಕ್ಕೆ ಛಿದ್ರಗೊಂಡಿರುವ ಈ ಶಿಲೆಗಳು ಮೇಲಕ್ಕೆ ಹಾಯಲು ಹಾದಿ ಒದಗಿಸಿವೆ. ಈ ದ್ರಾವಣ ರಯಲೈಟ್ ಮತ್ತು ಟುಫ್ ಶಿಲೆಗಳಲ್ಲಿಯ ಯುಕ್ತ ಖನಿಜಗಳನ್ನು ಪಲ್ಲಟಿಸಿ ಗೆಲಿನ ಸ್ಟ್ಯಾಲರೈಟ್ ಮತ್ತು ಚಾಲ್ಕೊಪೈರೈಟುಗಳ ಮಿಶ್ರಣ ಅದುರನ್ನು ರೂಪಿಸಿದೆ. ಇದರಲ್ಲಿ ಪೈರೈಟ್, ಅರ್ಸೆನೊಪೈರೈಟ್, ಲೋಲಿಂಗೈಟ್, ಗೆರ್ಸೊಡೊಪೈಟ್, ಕ್ಯೂಬಿನೈಟ್, ಟೆಟ್ರಹೆಡ್ರೈಟ್, ಬೌರ್ನೊನೈಟ್, ಬೌಲಾಂಗೆರೈಟ್ ಮತ್ತು ಪೈರಾರ್ಗರೈಟುಗಳು ಒಮ್ಮೊಮ್ಮೆ ಸಿಗುವುದುಂಟು, ಅಕ್ಸೀಕರಣ ವಲಯದಲ್ಲಿ ಸೆರೂಸೈಟ್, ಆಂಗೈಸೈಟ್, ಪೈರೊಮಾರ್ಫೈಟ್, ಮೆಲಕೊನೈಟ್, ಚಾಲ್ಕೊಸೈಟ್, ನೈಜ ತಾಮ್ರ, ಮೆಲಕೈಟ್, ಅಜುರೈಟ್ ಕೆಲಮೀನ್ ಮಸ್ಸಿಕಾಟ್, ಗೂಸ್ಲರೈಟ್ ಮತ್ತು ಬ್ರೊಕ್ಯಾಟ್ಯೆಟುಗಳು ಭೂಮಿಯ ಮೇಲ್ಮೈಯಲ್ಲಿ ದೊರೆಯುತ್ತವೆ. ಚೈನಾಮ್ಯಾನ್ ಅದುರುಕಾಯ 365 ಮೀ ಉದ್ದ ಮತ್ತು 365 ಮೀ ಆಳದವರೆಗೆ ವಿಸ್ತರಿಸಿದೆ. ಇದರಲ್ಲಿ 43(15 ಚಮೀ ಸೀಸ-ಸತುವುಗಳ ಅದುರು ಉಂಟು. ಷಾನ್ ಅದುರು ಕಾಯದ ದಪ್ಪ 6 ಮೀ, ತಾಮ್ರದ ಪ್ರಮಾಣ ಹೆಚ್ಚಾಗಿರುವುದು ಇದರ ವೈಶಿಷ್ಟ್ಯ ಮೈಂಗ್‍ಥ ಕಾಯದ ಅದುರು 6ನೆಯ ಮಟ್ಟದವರೆಗೆ ಚೈನಾಮ್ಯಾನ್ ಅದುರನ್ನು ಹೋಲುತ್ತದೆ. ಆ ಮಟ್ಟದ ಕೆಳಗೆ ದೊರೆಯುವ ಅದುರಿನಲ್ಲಿ ತಾಮ್ರ ಹೆಚ್ಚಿ ಸೀಸ ಮತ್ತು ಸತುವು ಕ್ಷೀಣಿಸುತ್ತವೆ: ಆದರೆ ನಿಕ್ಕಲ್ ಮತ್ತು ಕೊಬಾಲ್ಟ್ ಇರುವುದರಿಂದ ಅದು ಲಾಭದಾಯಕವಾಗಿದೆ. ಬಾಡ್‍ವಿನ್ ಸ್ತರಭಂಗಕ್ಕೆ ಉತ್ತರದಲ್ಲಿ 610 ಮೀ ದೂರದಲ್ಲಿರುವ ರಯೊಲೈಟನಲ್ಲಿ ಚಾಲ್ಕೊಪೈರೈಟ್ ಸಿರವಿದೆ. ಇದಕ್ಕೆ ಚಿನ್ ಅದುರು ಕಾಯವೆಂದು ಹೆಸರು.

ಅದುರಿನ ಮುಖ್ಯ ಅಕ್ಷ ಉತ್ತರಕ್ಕೆ. ಚೈನಾಮ್ಯಾನ್ ಮತ್ತು ಷಾನ್ ಕಾಯಗಳು ಪಶ್ಚಿಮಕ್ಕೆ ಮೈಂಗ್‍ಥ ಕಾಯ ಪೂರ್ವಕ್ಕೆ ಓರೆಯಾಗಿವೆ. ಕೆಳಗಿನ ಪಟ್ಟಿ ಈ ಮೂರು ಮುಖ್ಯ ಅದುರುಕಾಯಗಳಲ್ಲಿ ಮೇಲಿನಿಂದ ಆಳಕ್ಕೆ ಹೋದ ಹಾಗೆ ಬೆಳ್ಳಿ, ಸೀಸ, ಸತುವು ಮತ್ತು ತಾಮ್ರಗಳ ಹಂಚಿಕೆಯಲ್ಲಿ ಕಾಣುವ ವ್ಯತ್ಯಾಸವನ್ನು ತೋರಿಸುತ್ತದೆ. ಇಲ್ಲಿ ಒಟ್ಟು 4 ದಶಲಕ್ಷ ಟನ್ ಅದುರು ಇರುವುದೆಂದೂ ಅದರಲ್ಲಿ ಠಿb 25%, zಟಿ 15%, ಅuಔ 7% ಮತ್ತು ಬೆಳ್ಳಿ 570 ಗ್ರಾಮ್ ಪ್ರಮಾಣದಲ್ಲಿ ದೊರೆಯುವುದೆಂದೂ ಅಂದಾಜು ಮಾಡಲಾಗಿದೆ.
ಬಾಡ್‍ವಿನ್ ಅದುರಗಳ ವಿಶ್ಲೇಷಣ ಮೌಲ್ಯಗಳು

ಬೆಳ್ಳಿಯ ಪ್ರಮಾಣ

ಅದುರುಕಾಯ ಮತ್ತು ಮಟ್ಟ
ಬೆಳ್ಳಿ ಕೆಜಿ
ಸೀಸಾ %
ಸತುವು %
ತಾಮ್ರ %
ಸೀಸಕ್ಕೆ

ಉಳಿದೆಲ್ಲ ಲೋಹಗಳಿಗೆ

ಚೈನಾಮ್ಯಾನ್ ನಂ. 2
0.55
24.1
20.9
0.1
1-1.24
1-2.32

	ನಂ. 4
0.9
31.8
22.8
0.7
1-1.03
1-1.7

	ನಂ. 6
0.65
28.1
14.2
0.5
1-1.22
1-1.85

	ನಂ. 9
0.41
23
9.1
0.3
1-1.58
1-2.22

ಮೈಂಗ್‍ಥ	ನಂ. 2
0.38
15.4
11.4
1.23
1-1.16
1-2.11

	ನಂ. 4	
0.52
24
12.7
1.31
1-1.31
1-2.08

	ನಂ. 6
0.39
17.4
0.4
1.6
1-1.25
1-1.83

	ನಂ. 9
0.14
7.3
1.4
3.5
1-1.46
1-2.44

ಷಾನ್	ನಂ. 2
0.38
24.6
6.8
0.7
11-1.85
1-2.41

	ನಂ. 4
0.67
14.8
10.2
8.2
1-0.62
1-1.4

	ನಂ. 6
0.54
21
13.1
2.2
1-1.1
1-1.9

	ನಂ. 9
0.6
30.3
10
0.35
1-1.42
1-1.9

ಗಣಿ ಉದ್ಯಮದ ಇತಿಹಾಸ : ಹದಿನಾಲ್ಕನೆಯ ಶತಮಾನದ ಆದಿಯಲ್ಲಿಯೇ ಚೀನೀಯರು ಬಾಡ್‍ವಿನ್ ಗಣಿಯಿಂದ ಹೊರತೆಗೆದ ಅದುರಿನಿಂದ ಬೆಳೆಯನ್ನು ಸಂಸ್ಕರಿಸುತ್ತಿದ್ದರು. ಈ ಉದ್ಯಮ ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದ ತನಕವೂ ಮುಂದುವರಿಯಿತು. ಆಗ ಯೂನಾನಿನಲ್ಲಿ ಮಹಮದೀಯರು ದಂಗೆ ಎದ್ದುದರಿಂದಲೂ ಗಣಿಯ ಆಳದಿಂದ ನೀರನ್ನು ಹೊರದೂಡುವ ಸಮಸ್ಯೆ ಇದ್ದುದರಿಂದಲೂ ಈ ಉದ್ಯಮವನ್ನು ಕೈಬಿಡಲಾಯಿತು. ಬೆಳ್ಳಿಯನ್ನು ಬೇರ್ಪಡಿಸಿತೆಗೆದುಕೊಂಡು, ಧಾರಕವಸ್ತುವಾದ ಸೀಸದ ಕಿಟ್ಟವನ್ನು ತ್ಯಜಿಸಿದ್ದರು. 1909ರಲ್ಲಿ ಯೂರೊಪಿಯನರ ಗಮನ ಇದರ ಮೇಲೆ ಹರಿಯಿತು. ಅದು ಮುಗಿಯುವ ತನಕ ಅದರಿಂದ ಸೀಸವನ್ನು ಅಗಾಧ ಮೊತ್ತದಲ್ಲಿ ಪಡೆಯಲಾಯಿತು. 1912ರಲ್ಲಿ ಚೈನಾಮ್ಯಾನ್ ಅದುರುಕಾಯವನ್ನು ಶೋಧಿಸಲಾಯಿತು. 1919ರಲ್ಲಿ ಬರ್ಮಾ ಗಣಿ ಲಿಮಿಟೆಡ್‍ನ್ನು ಬರ್ಮಾ ಕಾರ್ಪೊರೇಷನ್ ಲಿಮಿಟೆಡ್ ವಶಕ್ಕೆ ತೆಗೆದುಕೊಂಡು 18 ಕೋಟಿ ರೂಪಾಯಿ ಬಂಡವಾಳ ಹಾಕಿ ಉದ್ಯಮವನ್ನು ಪುನರಾರಂಭಿಸಿತು.

ಗಣಿಯೊಳಗೆ ಪ್ರವೇಶಿಸಲು ಟೈಗರ್ ಸುರಂಗ ಪ್ರಮುಖ ಹಾದಿ. ಇದು 6ನೆಯ ಮಟ್ಟಕ್ಕೆ ಸಮವಾಗಿ 200 ಮೀ ಆಳದಲ್ಲಿ 2210 ಮೀ ಉದ್ದವಿದೆ. ಸುರಂಗವನ್ನು ಕಲ್ಲುಕಟ್ಟಿ ಭದ್ರಪಡಿಸಲಾಗಿದೆ. ಗಣಿಯ ಕಾರ್ಯಕ್ಷೇತ್ರದಿಂದ ಮರ್ಮಿಯನ್ ಲಂಬದಾರಿಯವರೆಗೆ ಜೋಡು ಕಂಬಿಯ ಮಾರ್ಗವಿದೆ. ಈ ಲಂಬ ದಾರಿಯನ್ನು ಷಾನ್ ಅದುರುಕಾಯದ ಪಶ್ಚಿಮದಲ್ಲಿ ತೋಡಲಾಗಿದೆ. ಇದರ ಆಳ 530 ಮೀ. ಇದರಲ್ಲಿ 37-46 ಮೀ ಅಂತರದಲ್ಲಿ 14 ಮಟ್ಟಗಳಿವೆ. 6ನೆಯ ಮಟ್ಟ ಸಾಗಾಣಿಕೆ ಮತ್ತು ನೀರು ಹೊರದೂಡುವಿಕೆಗೆ ಮುಖ್ಯವಾದ ಮಟ್ಟ, ಎಲ್ಲ ಕಡೆಗಳಿಂದ ಹೊರತೆಗೆದು ಅದುರನ್ನು ಇಲ್ಲಿ ಮೇಲೆತ್ತಲಾಗುವುದು ಅಥವಾ ಇಳಿಸಲಾಗುವುದು. ಇಲ್ಲಿಂದ ವಿದ್ಯುತ್ ಟ್ರಾಮ್ ಬಂಡಿಗಳಲ್ಲಿ ಅದುರನ್ನು ಟೈಗರ್, ಠಾಣ್ಯದಲ್ಲಿರುವ ಮಳಿಗೆಗಳಿಗೆ ಸಾಗಿಸಲಾಗುವುದು. ಈ ಗಣಿಗೂ ಕುಲುಮೆಯಿರುವ ನಾಮ್‍ಟು ಪಟ್ಟಣಕ್ಕೂ ನಡುವಿನ ಅಂತರ 21 ಕಿಮೀ. ಇವೆರಡರ ಮಧ್ಯ ಕಂಪನಿಯ ರೈಲು ಮಾರ್ಗವಿದೆ. ಗಣಿಗೂ ನಾಮ್‍ಯವೊಗೂ (ರೈಲ್ವೆನಿಲ್ದಾಣ) ನಡುವೆ ಕಂಪನಿ ರೈಲ್ವೆ ಸಂಪರ್ಕ ಏರ್ಪಡಿಸಿದೆ. ಇಲ್ಲಿ ದಿನವಹಿ-800-1000 ಟನ್ ಅದುರನ್ನು ಪುಡಿಮಾಡಿ ತೇಲಿಸುವ ಗಿರಣಿ ಇದೆ. ನಾಮ್ ನದಿಯ ಮಾನಾಸಂ ಜಲಪಾತದಿಂದ ಕಂಪನಿ ವಿದ್ಯುತ್ತನ್ನು ಉತ್ಪತ್ತಿಮಾಡಿ ಗಣಿಗೆ ಒದಗಿಸುತ್ತದೆ. ಈ ಗಿರಣಿಯಲ್ಲಿ ಐದು ವಿದ್ಯುತ್ ಊದುಕುಲುಮೆಗಳೂ ಇವಕ್ಕೆ ಲಗತ್ತಿಸಿದಂತೆ ಸುಡುಕುಲುಮೆಗಳೂ ಶೋಧನಾಗಾರಗಳೂ ಇವೆ. ಇಲ್ಲಿ ಬೆಳ್ಳಿಯನ್ನು ಸೀಸದಿಂದ ಬೇರ್ಪಡಿಸಲಾಗುವುದು. ಮುಂದಿನ ಪಟ್ಟಿಯಲ್ಲಿ 1909ರಿಂದ 1941ರ ತನಕ ಬಾಡ್‍ವಿನ್ ಗಣಿ ಅದುರಿನಿಂದ ಪಡೆಯಲಾದ ಸೀಸದ ಮೊತ್ತವನ್ನು ಕೊಟ್ಟಿದೆ.

ನಾಮ್‍ಟು ಸೀಸದ ಉತ್ಪತ್ತಿ, 1909-1941
ಅವಧಿ
ಒಟ್ಟು ಟನ್ನುಗಳು
ಸ್ಟರ್ಲಿಂಗ್ ಮಾಲ್ಯ ₤

1909-13
45.550
632,505

1914-18
73,817
1,792,345

1919-23
161,902
4,405,718

1924-28
297,715
8,340,471

1929-33
377,995
5,887,169

1934-38
374,780
6,218,633

1939-41
229,895
3,715,342 (1941 ರ ಅಂದಾಜು ಮೌಲ್ಯ)

ಜುಮ್ಲ
1,561,654 ಟನ್ನುಗಳು
30,992,183

ಎರಡನೆಯ ಮಹಾಯುದ್ಧ ಕಾಲದಲ್ಲಿ ಜಪಾನೀಯರ ಆಕ್ರಮಣದಿಂದ ಗಣಿ ಉದ್ಯಮಕ್ಕೆ ಅಡಚಣೆಯುಂಟಾಯಿತು. ಆ ತನಕ ಶೇಖರಿಸಲಾಗಿದ್ದ ದಾಸ್ತಾನನ್ನು ಕರಗಿಸಿ 1948ರಲ್ಲಿ 264 ಟನ್ ಮತ್ತು 1949ರಲ್ಲಿ 846 ಟನ್ ಲೋಹವನ್ನು ಪಡೆಯಲಾಯಿತು. ಉಳಿದ ದಾಸ್ತಾನಿನಿಂದ 1400 ಟನ್ ಸೀಸ ಮತ್ತು 5100 ಕೆಜಿ ಬೆಳ್ಳಿ ದೊರೆಯುವುದೆಂದು ನಿರೀಕ್ಷಿಸಲಾಗಿದೆ. 1951ರಲ್ಲಿ ಬರ್ಮಾ ಸರ್ಕಾರ ಕಂಪನಿಯಲ್ಲಿ ಸಮಪಾಲು ಬಂಡವಾಳ ಹೂಡಿತು. ಆದ್ದರಿಂದ ಗಣಿ ಉದ್ಯಮ ಸುಗಮವಾಗಬಹುದೆಂದು ನಿರೀಕ್ಷಿಸಲಾಗಿದೆ.

ಸತುವು : 1914-40ರ ಅವಧಿಯಲ್ಲಿ ಉತ್ಪಾದಿಸಿದ ಅಥವಾ ರಪ್ತು ಮಾಡಿದ ಸತುವು ಸಂಗ್ರಹಣವನ್ನು ಮುಂದಿನ ಪಟ್ಟಿಯಲ್ಲಿ ಕೊಟ್ಟಿದೆ.
ಅವಧಿ
ಒಟ್ಟು ಟನ್ನುಗಳು
ಸ್ಟರ್ಲಿಂಗ್ ಮಾಲ್ಯ £

1914-18
11,974
27,274

1919-23
24, 198
122,435

1924-28
206,702
1,881,727

1929-33
273,426
1,072,523

1934-38
358,531
1,427,234

1939-40
111,132
322,778

ಜುಮ್ಲ
985,963
4,853,971

ಜೈನಾಮ್ಯಾನ್ ಅದುರು ಕಾಯದಲ್ಲಿ 4ನೆಯ ಮಟ್ಟದವರೆಗೆ ಸಿಗುವ ಅದುರಿನಲ್ಲಿ ಸತುವು 20.5% ಪ್ರಮಾಣದಲ್ಲಿ ದೊರೆಯುತ್ತದೆ. ಅಲ್ಲಿಂದ ಕೆಳಗೆ ಹೋದ ಹಾಗೆ ಅದರ ಪ್ರಮಾಣ ಕ್ರಮವಾಗಿ ಕಡಿಮೆಯಾಗುತ್ತ ಗಣಿಯ ತಳದಲ್ಲಿರುವ ಅದುರಿನಲ್ಲಿ 9.1% ಪ್ರಮಾಣವಿರುವುದು. ಮೇಲಿನ ಪಟ್ಟಿಯಲ್ಲಿ ಬರ್ಮಾ ಕಾರ್ಪೊರೇಷನ್ ಲಿಮಿಟೆಡ್ ಉತ್ಪತ್ತಿಮಾಡಿದ ಅಥವಾ ರಪ್ತು ಮಾಡಿದ ಸತುವು ಸಂಗ್ರಹವನ್ನು ಕೊಟ್ಟಿದೆ. ಸತುವು ಸಂಗ್ರಹವನ್ನು 1934ರತನಕ ಬೆಲ್ಜಿಯಮ್ ಮತ್ತು ಜರ್ಮನಿಗೆ ಮುಖ್ಯವಾಗಿ ಬೆಲ್ಜಿಯಮಿಗೆ, ಅನಂತರ ಅಸ್ಟ್ರೇಲಿಯಕ್ಕೆ ರಪ್ತು ಮಾಡಲಾಯಿತು.
ಬೆಳ್ಳಿ : ಈ ಗಣಿಯ ಅದುರುಗಳಲ್ಲಿ ಬೆಳ್ಳಿಯ ಖನಿಜಗಳು ಅಗೋಚರವಾಗಿರುವುವು, ಪೈರಾರ್ಗರೈಟಾ ಗಣಿಯ ಮೇಲ್ಭಾಗದಿಂದ ತಳದವರೆಗೂ ವ್ಯಾಪಿಸಿರುವುದನ್ನು ಜೆ.ಎ.ಡನ್‍ರವರು ಸೂಕ್ಷ್ಮದರ್ಶಕ ಪರಿಶೋಧನೆಯಿಂದ ತೋರಿಸಿದ್ದಾರೆ. ಪೈರಾರ್ಗರೈಟನ ರಾಸಾಯನಿಕ ಸಂಯೋಜನೆ 3ಂg2SSb2S3. ಇದು ಬಿಡಿಯಾಗಿ ಇರಬಹುದು ಇಲ್ಲವೆ ಟೆಟ್ರಹೈಡ್ರೈಟ್, ಬೌಲಾಂಗರೈಟ್ ಮತ್ತು ಬೌರ್ನನೈಟುಗಳನ್ನು ಪಲ್ಲಟಿಸಿರುತ್ತದೆ. ಗೆಲಿನಾದಲ್ಲಿ ಬೆಳ್ಳಿ ಘನ ದ್ರಾವಣ ರೂಪದಲ್ಲಿಯೂ ದೊರೆಯುತ್ತದೆ. ಗೆಲಿನಾ ಮತ್ತು ಸ್ಟ್ಯಾಲರೈಟುಗಳು ಮಿಶ್ರಣದ ಅದುರಿನಲ್ಲಿ ಬೆಳ್ಳಿ 1% ಭಾಗ ಇರುವುದು. ನಾಮ್‍ಟು ಮಿಲ್ಲಿನಲ್ಲಿ ಈ ಅದುರಿನಿಂದ ಪಡೆದ ಲೋಹಗಳ ಪ್ರಮಾಣವನ್ನು ಕೆಳಗಿನ ಪಟ್ಟಿಯಲ್ಲಿ ಕೊಟ್ಟಿದೆ.
ಬಾಡ್‍ವಿನ್ ಗಣಿಯಲ್ಲಿ ಪುಡಿಮಾಡಿದ ಉತ್ಪನ್ನಗಳ ಸಂಯೋಜನೆ

ಲೋಹ ಮೌಲ್ಯ

ಉತ್ಪನ್ನ

ಬೆಳ್ಳಿ (ಕೆಜಿ)

ಸೀಸ (%)

ಸತುವು (%)

ತಾಮ್ರ (%)

ದಪ್ಪ ಸಂಗ್ರಹಣ
1.3
65.03
9.1
0.33

ಪ್ಲವನ ಸಂಗ್ರಹಣ
1.14
70.18
7.32
0.50

ತಾಮ್ರ ಸಂಗ್ರಹಣ
3.85
34.77
13.06
9.85

ಕಬ್ಬಿಣ ಸಂಗ್ರಹಣ
0.33
14.41
12.15
0.57

ಸತುವಿನ ಸಂಗ್ರಹಣ
0.26
6.01
51.66
—

ಸೀಸ ಮತ್ತು ತಾಮ್ರಗಳೊಡನೆ ಬೆಳ್ಳಿ ಜೊತೆಗೂಡಿರುವುದನ್ನೂ ಸತುವಿನೊಡನೆ ಇಲ್ಲದಿರುವುದನ್ನೂ ಲೋಹ ಪರೀಕ್ಷಣೆಯ ಅಂಕೆ ಅಂಶಗಳನ್ನು ಎತ್ತಿತೋರುತ್ತವೆ.
ತಾಮ್ರ: ಚೈನಾಮ್ಯಾನ್, ಷಾನ್, ಮೈಂಗ್‍ಥ ಮತ್ತು ಚಿನ್ ಅದುರು ಕಾಯಗಳ ಸೀಸ-ಬೆಳ್ಳಿ-ಸತುವು ಅದುರಿನಲ್ಲಿ  ಚಾಲ್ಕೊಪೈರೈಟು ದೊರೆಯುತ್ತದೆ. ನಾಮ್‍ಟುನಲ್ಲಿ ಲೋಹ ಪಡೆಯುವ ಕಾರ್ಯದ ಮೂಲಕ ಪಡೆದ ಮಟ್ ರೂಪದ ತಾಮ್ರವನ್ನು ಯೂರೊಪಿಗೆ ರಫ್ತು ಮಾಡಲಾಗುತ್ತಿತ್ತು. ಇದರಲ್ಲಿ 44% ಭಾಗ ತಾಮ್ರ, 30% ಭಾಗ ಸೀಸ ಮತ್ತು ಟನ್ ಒಂದಕ್ಕೆ 2-2.3 ಕೆಜಿ ಬೆಳ್ಳಿ ಇವೆ. ಈ ವಸ್ತುವನ್ನು 1924ರಿಂದ 1940ರ ತನಕ ಉತ್ಪತ್ತಿ ಮಾಡಲಾಯಿತು. ಇದರ ಮೌಲ್ಯ £3,7,90,113. ಇದರಲ್ಲಿ 1940 ಕೆಜಿ ತಾಮ್ರವಿರುವುದೆಂದು ಅಂದಾಜು ಮಾಡಲಾಗಿದೆ. 1948ರಲ್ಲಿ ಉತ್ಪನ್ನಕಾರ್ಯ ಪುನರಾರಂಭವಾಗಿ 1951ರ ತನಕ 302 ಟನ್ ಮಟ್ ರೂಪದ ತಾಮ್ರವನ್ನು ಪಡೆಯಲಾಯಿತು.
ನಿಕ್ಕಲ್, ಕೊಬಾಲ್ಟ್, ಅ್ಯಂಟಮೊನಿ ಮತ್ತು ಕ್ಯಾಡ್ಮಿಯಮ್: ಬಾಡ್‍ವಿನ್ ಗಣಿಯ ಸೀಸ-ಸತುವು-ತಾಮ್ರ-ಬೆಳ್ಳಿ ಅದುರಿನಲ್ಲಿ ನಿಕ್ಕಲ್ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ನಾಮ್‍ಟುನಲ್ಲಿ ಕರಗಿಸುವ ವಿಧಾನದಿಂದ 1942ರ ತನಕ ಸ್ಪೈಸ್ ರೂಪದಲ್ಲಿ ನಿಕ್ಕಲನ್ನು ಪಡೆಯಲಾಯಿತು. ಇದರಲ್ಲಿ ಗೆರ್ಸೊಡೊಫೈಟ್ ಓiಂsS ಇರುವುದನ್ನು ಜೆ.ಎ.ಡನ್ ಗುರುತಿಸಿದ. 1927ರಿಂದ 1940ರ ತನಕ 45,457 ಟನ್ ಈ ಅದುರನ್ನು ಪಡೆಯಲಾಯಿತು. ಇದರಲ್ಲಿ 13,223 ಟನ್ ನಿಕಲ್ ಇರಬಹುದೆಂದು ಅಂದಾಜು ಮಾಡಲಾಗಿದೆ ಹಾಗೂ ಕೊಬಾಲ್ಟ್, ಬೆಳ್ಳಿ ಮತ್ತು ತಾಮ್ರಗಳು ಅಧಿಕ ಪ್ರಮಾಣದಲ್ಲಿರುವುವು. ಬಾಡ್‍ವಿನ್ ಗಣಿಯ ಪ್ರದೇಶದಲ್ಲಿ ಸೀಸ-ಸತುವಿನ ಅದುರನ್ನು ರಾಶಿ ಹಾಕಿದ್ದಾಗ, ಅದರ ಮೇಲೆ ಊದಾ ಬಣ್ಣದ ಎರಿತ್ರೈಟಿನ ತೆಳುಪೊರೆಯ ಹೆಕ್ಕಳಿಕೆ ಕಟ್ಟಿತು. ಆ ಅದುರಿನಲ್ಲಿ ಕೊಬಾಲ್ಟ್ ಅಂಶವಿರುವುದು ಈ ರೀತಿ ವ್ಯಕ್ತವಾಯಿತು, ಕರಗಿಸಿದಾಗ ಕೊಬಾಲ್ಟ್ ನಿಕ್ಕಲ್ ಸ್ಪೈಸ್‍ನಲ್ಲಿ ಸೇರಿಕೊಳ್ಳುತ್ತದೆ. ಗಣಿಯ ಆಳಕ್ಕೆ ಹೋದ ಹಾಗೆಲ್ಲ ಕೊಬಾಲ್ಟ್ ಪ್ರಮಾಣ 3%ರಿಂದ 8%ಕ್ಕೆ ಹೆಚ್ಚುವುದು. 1927ರಿಂದ 1940ರ ತನಕ 2370ಟನ್ ಕೊಬಾಲ್ಟನ್ನು ಪಡೆಯಲಾಯಿತು.
ನಾಮ್‍ಟುನ ನಿಕ್ಕಲ್ ಸ್ಪೈಸ್‍ನ ವಾರ್ಷಿಕ ಸರಾಸರಿ ಉತ್ಪನ್ನ

ಮೌಲ್ಯ

ಸಂಯೋಜನೆ

ಆವಧಿ
ಟನ್ನುಗಳು
(ರೂಪಾಯಿ ಗಳಲ್ಲಿ)

ನಿಕ್ಕಲ್ %

ತಾಮ್ರ %

ಕೊಬಾಲ್ಟ್ %

ಬೆಳ್ಳಿ ಟನ್ನಿಗೆ ಗ್ರಾಮ್

1927-28
1,982
3,55,747
24.72
15.56
3.4
932

1929-33
3,211
8,19,023
27.98
11.64
3.4
852

1934-38
4,032
13,04,918
30.44
9.28
5.85
540

1939-40
2,638
12,61,182
30.91
8.23
7.97
420

ಬಾಡ್‍ವಿನ್ ಅದುರಿನಲ್ಲಿ ಆಂಟಿಮೊನಿ ಲೋಹಾಂಶವಿರುವ ಬೌಲಾಂಗೆರೈಟ್, ಬಾರ್ನೊನೈಟ್, ಪೈರಾರ್ಗರೈಟ್ ಮತ್ತು ಟೆಟ್ರಹೆಡ್ರೈಟ್ ಖನಿಜಗಳಿವೆ. ಇದರಲ್ಲಿ ಆಂಟಿಮೊನಿ ಅಂಶ 1% ರಷ್ಟಿದೆ. ಈ ಅದುರಿನಲ್ಲಿ ಕ್ಯಾಡ್ಮಿಯಮ್ ಸಹ ಅತ್ಯಲ್ಪ ಪ್ರಮಾಣದಲ್ಲಿದೆ.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ